1 ಕೊರಿಂಥದವರಿಗೆ 2 : 1 (KNV)
ಸಹೋದರರೇ, ನಾನಂತೂ ದೇವರ ಸಾಕ್ಷಿಯನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಲಿ ಜ್ಞಾನದಿಂದಾಗಲಿ ಬರಲಿಲ್ಲ.
1 ಕೊರಿಂಥದವರಿಗೆ 2 : 2 (KNV)
ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯ ಕೂಡದೆಂದು ನಾನು ನಿಮ್ಮಲ್ಲಿ ತಿರ್ಮಾನಿಸಿ ಕೊಂಡೆನು.
1 ಕೊರಿಂಥದವರಿಗೆ 2 : 3 (KNV)
ಇದಲ್ಲದೆ ನಾನು ನಿಮ್ಮ ಬಳಿಯಲ್ಲಿದ್ದಾಗ ಬಲಹೀನನೂ ಭಯಪಡುವವನೂ ಬಹುನಡುಗು ವವನೂ ಆಗಿದ್ದೆನು.
1 ಕೊರಿಂಥದವರಿಗೆ 2 : 4 (KNV)
ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಮನುಷ್ಯಜ್ಞಾನ ವಾಕ್ಯಗಳನ್ನು ನಾನು ಪ್ರಯೋಗಿಸದೆ ಆತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.
1 ಕೊರಿಂಥದವರಿಗೆ 2 : 5 (KNV)
ಹೀಗೆ ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಂಡಿರದೆ ದೇವರ ಶಕ್ತಿಯನ್ನೇ ಆಧಾರ ಮಾಡಿಕೊಂಡಿರಬೇಕು.
1 ಕೊರಿಂಥದವರಿಗೆ 2 : 6 (KNV)
ಆದರೂ ಪರಿಪೂರ್ಣರಾದವರಲ್ಲಿ ಜ್ಞಾನವನ್ನೇ ನಾವು ಹೇಳುತ್ತೇವೆ; ಆದಾಗ್ಯೂ ಅದು ಇಹಲೋಕದ ಜ್ಞಾನವಲ್ಲ ಇಲ್ಲವೆ ಇಲ್ಲದೆ ಹೋಗುವ ಇಹ ಲೋಕಾಧಿಪತಿಗಳ ಜ್ಞಾನವೂ ಅಲ್ಲ.
1 ಕೊರಿಂಥದವರಿಗೆ 2 : 7 (KNV)
ಆದರೆ ಗುಪ್ತ ವಾಗಿದ್ದ ಜ್ಞಾನವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ; ಅದನ್ನು ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿದನು.
1 ಕೊರಿಂಥದವರಿಗೆ 2 : 8 (KNV)
ಇದನ್ನು (ಆ ಜ್ಞಾನವನ್ನು) ಇಹಲೋಕಾಧಿ ಪತಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆ ಯುಳ್ಳ ಕರ್ತನನ್ನು ಶಿಲುಬೆಗೆ ಹಾಕುತ್ತಿರಲಿಲ್ಲ.
1 ಕೊರಿಂಥದವರಿಗೆ 2 : 9 (KNV)
ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ.
1 ಕೊರಿಂಥದವರಿಗೆ 2 : 10 (KNV)
ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅವುಗಳನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ಹೌದು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸು ವವನಾಗಿದ್ದಾನೆ.
1 ಕೊರಿಂಥದವರಿಗೆ 2 : 11 (KNV)
ಮನುಷ್ಯನ ಒಳಗಿನ ವಿಷಯಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿದಾವು? ಹಾಗೆಯೇ ದೇವರ ವಿಷಯಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವದಿಲ್ಲ.
1 ಕೊರಿಂಥದವರಿಗೆ 2 : 12 (KNV)
ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವವುಗಳನ್ನು ತಿಳುಕೊಳ್ಳು ವದಕ್ಕಾಗಿ ದೇವರ ಆತ್ಮನನ್ನೇ ಹೊಂದಿದೆವು.
1 ಕೊರಿಂಥದವರಿಗೆ 2 : 13 (KNV)
ಇವುಗಳನ್ನು ಮಾನುಷ್ಯಜ್ಞಾನವು ಕಲಿಸಿದ ಮಾತು ಗಳಿಂದ ಹೇಳದೆ ಪರಿಶುದ್ಧಾತ್ಮನು ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮ ಸಂಬಂಧವಾದವುಗಳನ್ನು ಆತ್ಮೀಕವಾದವುಗಳೊಂದಿಗೆ ಹೋಲಿಸುತ್ತೇವೆ.
1 ಕೊರಿಂಥದವರಿಗೆ 2 : 14 (KNV)
ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.
1 ಕೊರಿಂಥದವರಿಗೆ 2 : 15 (KNV)
ಆತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನು ವಿಚಾರಿಸಿ ತಿಳುಕೊಳ್ಳುತ್ತಾನೆ; ಆದರೆ ಇವನನ್ನು ಯಾವನೂ ವಿಚಾರಿಸಿ ತಿಳುಕೊಳ್ಳುವದಿಲ್ಲ.
1 ಕೊರಿಂಥದವರಿಗೆ 2 : 16 (KNV)
ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು? ನಮಗಾದರೋ ಕ್ರಿಸ್ತನ ಮನಸ್ಸು ಇರುತ್ತದೆ.
❮
❯